ವಿರಾಟ್ ಕೊಹ್ಲಿ (ಜನನ: ನವೆಂಬರ್ ೫, ೧೯೮೮ ಡೆಲ್ಲಿಯಲ್ಲಿ) ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ. ಇವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮಾನ್. ಇವರು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ಕೊಹ್ಲಿ ೨೦೦೮ರಲ್ಲಿ ಮಲೇಶಿಯಾದಲ್ಲಿ ನಡೆದ ೧೯ ವರ್ಷ ವಯಸ್ಸಿನೊಳಗಿರುವವರ ಕ್ರಿಕೆಟ್ ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕರಾಗಿ ವಿಶ್ವಕಪ್ ಗೆದ್ದರು. ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದ್ರೆ ಇವರು ಕರ್ನಾಟಕಕ್ಕೆ ಸೇರಿರುವ ಪ್ರಥಮ ಆಕಾಗಾರರು . ತಮ್ಮ ಮೊದಲ ಏಕದಿನ ಪಂದ್ಯವನ್ನು ೧೮ ಆಗಸ್ಟ್ ೨೦೦೮ರಲ್ಲಿ ಆಡಿದರು. ರಣಜಿ ಟ್ರೋಫಿಯಲ್ಲಿ ಡೆಲ್ಲಿ ಕ್ರಿಕೆಟ್ ತ೦ಡದ ಪರವಾಗಿ ಆಡುತ್ತಾರೆ. == ವೈಯಕ್ತಿಕ ಜೀವನ == ವಿರಾಟ್ ಕೊಹ್ಲಿ ನವೆಂಬರ್ ೫,೧೯೮೮ರಂದು ದೆಹಲಿಯಲ್ಲಿ ಪ್ರೇಮ್ ಮತ್ತು ಸರೋಜ್ ಕೊಹ್ಲಿ ಎಂಬ ದಂಪತಿಗಳಿಗೆ ಜನಿಸಿದರು. ಕೊಹ್ಲಿಗೆ ವಿಕಾಶ್ ಎಂಬ ಅಣ್ಣ ಮತ್ತು ಭಾವ್ನಾ ಎಂಬ ಅಕ್ಕ ಇದ್ದಾರೆ. ವಿರಾಟ್ ತಂದೆ ಪ್ರೇಮ್ ವಕೀಲರಾಗಿದ್ದರು ಮತ್ತು ಡಿಸೆಂಬರ್ ೧೮, ೨೦೦೬ ರ೦ದು ಮರಣ ಹೊಂದಿದರು. ೨೧ ಡಿಸೆ೦ಬರ್ ೨೦೧೭ ರ೦ದು ನಟಿ ಅನುಷ್ಕಾ ಶರ್ಮಾರನ್ನು ವಿವಾಹವಾದರು. ವಿರಾಟ್ ಕೊಹ್ಲಿಯ ಕೆಲವು ಸ್ಪೂರ್ತಿದಾಯಕ ವಿಚಾರಗಳ ಸೂಚಿ: ಯಾವಾಗಲೂ ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸನ್ನು ಗಳಿಸಬಹುದು. ಸ್ವಾರ್ಥಕ್ಕಾಗಿ ನನ್ನ ಬಗ್ಗೆ ನಾನು ಎಂದಿಗೂ ಯೋಚಿಸುವುದಿಲ್ಲ, ಯಾವಾಗಲೂ ತಂಡಕ್ಕಾಗಿ ಆಡುತ್ತೇನೆ. ನಿಮ್ಮಲ್ಲಿ ಪ್ರತಿಭೆ ಇದೆಯೋ ಇಲ್ಲವೋ, ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಕೇವಲ ಪ್ರತಿಭಾವಂತರು ಏನನ್ನೂ ಮಾಡುವುದಿಲ್ಲ. == ಅಂತರಾಷ್ಟ್ರೀಯ ಶತಕಗಳು == ಟೆಸ್ಟ್ ಶತಕಗಳು ಏಕದಿನ ಶತಕಗಳು == ಪ್ರಶಸ್ತಿಗಳು == === ರಾಷ್ಟ್ರೀಯ ಗೌರವಗಳು === ೨೦೨೩ – ಅರ್ಜುನ ಪ್ರಶಸ್ತಿ, ಎರಡನೇ ಅತ್ಯುನ್ನತ ಕ್ರೀಡಾ ಗೌರವ. ೨೦೧೭ – ಪದ್ಮಶ್ರೀ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ೨೦೧೮ – ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ, ಭಾರತದ ಅತ್ಯುನ್ನತ ಕ್ರೀಡಾ ಗೌರವ. == ಉಲ್ಲೇಖಗಳು ==